Submission 844

ಶಿವಶಕ್ತಿ

ರಚನೆ : ಲಾವಣ್ಯ.ಆರ್

----------------------------------

ನೀನು ನಾನು ಬೇರೆನುವ ಅನುಭವವ ನೀಗಿಸಿದವ ತಾನು ತಾನೆಂದು ನನ್ನೊಳಗೆ ಅನುನಯದಿ ಮಿಡಿದ ನೀನೆನ್ನ ಶಿವನಲ್ಲವೇ ಗೊತ್ತು ಗುರಿಯಿರದ ಬಾಳಲ್ಲಿ ಹೊತ್ತ ವಿಷಯವನು ಕ್ಷಯಿಸಿ ಮತ್ತದೇ ವರ್ತುಲಕೆ ಸಿಗದಂತೆ ಚಿತ್ತಶುದ್ಧಿಯಗೈದ ನೀನೆನ್ನ ಶಿವನಲ್ಲವೇ ನಿನ್ನ ಪಡೆಯುವುದೇ ಎನ್ನ ಗುರಿಯೆಂದು ತಿಳಿದೂ ತಣ್ಣಗೆ ಮಲಗಿದವಳ ಬಡಿದು ಕಣ್ಣತೆರೆಸಿ ಮೇಲೇರಿಸಿ ರಸವ ನುಣಿಸಿ ತೋಯಿಸಿದ ನೀನೆನ್ನ ಶಿವನೇ.

----------------------------------

ನೋಂದಣಿ ಐಡಿ : KPF-S1-5385

0
Votes
230
Views
1 Year
Since posted

Finished since 458 days, 1 hours and 21 minutes.

Scroll to Top