Submission 950

ಆಸೆ..

ರಚನೆ : ಶರತ್ ಕುಮಾರ್.ಜಿ

----------------------------------

ಮಿಂಚಂತೆ ಹೊಳೆಯುವ ನಿನ್ನ ಕಂಗಳ ಹೊಳಪಿನಲ್ಲಿ ನಾ.. ಕರಗೋ ಆಸೆ..!! ಉಸಿರಿರೋವರೆಗೂ ನಿನ್ನ ನುಣುಪಾದ ಕೈಗಳನ್ನ ಹಿಡಿದು ನಾ..ನಡೆಸೋ ಆಸೆ..!! ಸಪ್ತಸ್ವರಗಳ ಹೊಮ್ಮಿಸುವ ನಿನ್ನ ಕಾಲ್ಗೆಜ್ಜೆಗೆ ನಾ..ಸ್ವರವಾಗೋ ಆಸೆ..!! ನಲಿದಾಡೋ ನವಿಲಿನ ಅಂದವನ್ನ ನಿನಗೊಪ್ಪಿಸಿ ನಾ.. ಕಣ್ತುಂಬಿಕೊಳ್ಳುವ ಆಸೆ..!! ಬೊಗಸೇಲಿ ಹಿಡಿದು ನಿನ್ನ ಮುದ್ದಾದ ಮೊಗವನ್ನ ನಾ.. ಚುಂಬಿಸೋ ಆಸೆ..!! ನಿನ್ನ ಹಸಿಮೈಯ ನನ್ನ ಎದೆಗಪ್ಪಿ ಬಿಸಿಯುಸಿರಲಿ ನಾ.. ಬಂಧಿಯಾಗೋ ಆಸೆ..!! ಕೊನೆಯುಸಿರೆಳೆವಾಗ ನಿನ್ನ ಮಡಿಲಿನಲಿ ಮಲಗಿ ನಾ..ಕಣ್ಮುಚ್ಚಿಕೊಳ್ಳೋ ಆಸೆ..!!

----------------------------------

ನೋಂದಣಿ ಐಡಿ : KPF-S1-5445

0
Votes
267
Views
1 Year
Since posted

Finished since 459 days, 1 hours and 31 minutes.

Scroll to Top