Submission 725

ಪ್ರಣಯಿನಿ

ರಚನೆ : ಆಸಿಫ್ ಹೆಚ್ ಎಮ್

----------------------------------

ಎನ್ನೆದೆಯ ಅರ್ಕಲೊಳಗೆ ಅನುರಾಗದಲೆಗಳ ಸಿಂಚನ ಚೆಲ್ವನೆ ಸ್ಪರ್ಶಕೆ ಚೆಲ್ಲನೆ ಶಿಲೆನಡುವಲೊಂದು ಪ್ರೀತಿ ಜನನ. ಅಧರಗಳಿಗೂ ಉನ್ಮನ, ಚುಂಬನದೀ ಉಸಿರಾಲಿಂಗನ. ನಿತ್ಯನೂತನ ಈ ಭಾವಯಾನ, ನಿನ್ನೊಂದಿಗೆ ನನಗನುದಿನ. ಅನುರಕ್ತಿಸು ಅನುಕ್ಷಣ, ಬಿಡುಗಣ್ಣಿಗದುವೇ ಅನುಪಾನ. ಅಂಗೀಕರಿಸು ಈದಿನ, ಇನ್ನೆಂದಿಗೂ ನಾನಿನ್ನ ಜೀವನ. ಕಲೇವರ ನಿನಗರ್ಪಣೆ ಕಳೇಬರವಾದರೂ ನಿನ್ನದೀಮನ ಹೃದಯಗಳ ಮಿಲನದ ಪ್ರತಿದರ್ಪಣ ನಾನಿನ್ನೂ ನೀನಾದೆನ...

----------------------------------

ನೋಂದಣಿ ಐಡಿ : KPF-S1-5320

0
Votes
230
Views
1 Year
Since posted

Finished since 459 days, 4 hours and 35 minutes.

Scroll to Top